Tel: 7676775624 | Mail: info@yellowandred.in

Language: EN KAN

    Follow us :


ಗ್ರಾಮಗಳ ತೋಟದ ಮನೆಗಳಲ್ಲಿ ಪಾರ್ಟಿಗೆ ಬ್ರೇಕ್, ರೌಡಿ ಪಟ್ಟಿಗೆ ಅಂದರ್ | ಕೃಷ್ಣನ ಜನ್ಮಸ್ಥಾನಕ್ಕೆ ಸೇರಬೇಕಾಗುತ್ತೆ ಹುಷಾರ್

Posted date: 26 May, 2021

Powered by:     Yellow and Red

ಗ್ರಾಮಗಳ ತೋಟದ ಮನೆಗಳಲ್ಲಿ ಪಾರ್ಟಿಗೆ ಬ್ರೇಕ್, ರೌಡಿ ಪಟ್ಟಿಗೆ ಅಂದರ್ | ಕೃಷ್ಣನ ಜನ್ಮಸ್ಥಾನಕ್ಕೆ ಸೇರಬೇಕಾಗುತ್ತೆ ಹುಷಾರ್

ನಗರ, ಹಳ್ಳಿ ಮತ್ತು ಹೈವೇಗಳಲ್ಲಿನ ವೈನ್ ಶಾಪ್ ಗಳು ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ.ಬಹುತೇಕ ಎಲ್ಲರೂ ಸಂಜೆ ವೇಳೆಯಲ್ಲಿ ಮಾತ್ರ ಪರಮಾತ್ಮನನ್ನು ಹೊಟ್ಟೆಗಿಳಿಸುತ್ತಾರೆ. ಆದರೆ ಯಾವುದೇ ವೈನ್ ಶಾಪ್ ಗಳು, ಡಾಭಾಗಳು, ರೆಸ್ಟೋರೆಂಟ್ ಗಳು ಲಾಕ್ಡೌನ್ ನಿಂದ ತೆರೆಯದಿರುವುದು ಮತ್ತು ಕೋವಿಡ್ ನೆಪ ಮಾಡಿಕೊಂಡು, ಹಳ್ಳಿಗಳಲ್ಲಿ ಮತ್ತು ನಗರದ ಕೆಲ ನಿಗೂಢ ಸ್ಥಳಗಳಲ್ಲಿ ಪಾರ್ಟಿ, ಮೋಜು ಮಸ್ತಿ ಮಾಡುವ ಮೂಲಕ ಜೂಜಾಟ, ಸೋಂಕು ಹರಡಲು ಕಾರಣವಾಗುತ್ತಿರುವವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ  ಕೈಗೊಳ್ಳಲು ಮುಂದಾಗಿದೆ.


ಗ್ರಾಮೀಣ ಭಾಗದ ತೋಟಗಳಲ್ಲಿ, ಕೆಲವು ಫಾರ್ಮ್ ಹೌಸ್ ಗಳಲ್ಲಿ ಗುಂಪು ಸೇರುವ ಯುವಕರು, ದಿನನಿತ್ಯದ ಕುಡುಕರು, ಮಾಂಸದೂಟದೊಂದಿಗೆ ಎಣ್ಣೆ ಪಾರ್ಟಿ ಮಾಡಿಕೊಂಡು, ಜೂಜಾಟವಾಡುತ್ತಿದ್ದರು. ಇಂತಹವರನ್ನು ಪೊಲೀಸರು ಬಂಧಿಸಿ, 87 ಕೆಪಿ (ಕರ್ನಾಟಕ ಪೊಲೀಸ್  ಆಕ್ಟ್) ಆಕ್ಟ್‌ನಡಿ ಪ್ರಕರಣ ದಾಖಲಿಸಿ, ಠಾಣೆಯ ಜಾಮಿನು ನೀಡಿ ಬಿಡುಗಡೆ ಮಾಡುತ್ತಿದ್ದರು. ಆದರೆ, ಇಂದಿನಿಂದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಆಪಿಡೆಮಿಕ್ ಹಾಗು ಡಿಎಂಎ ಆಕ್ಟ್ ಅಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇಂತಹ ಪ್ರಕರಣಗಳಲ್ಲಿ ಸಿಕ್ಕಿಬೀಳುವವರ ಮೇಲೆ ಕೂಡಲೇ ರೌಡಿ ಶೀಟರ್ ತೆರೆದು, ಜೈಲಿಗಟ್ಟಲಿದ್ದಾರೆ.


*ಈ ಕ್ರಮದ ಹಿಂದಿನ ಉದ್ದೇಶ*

ಲಾಕ್‌ಡೌನ್ ವೇಳೆ ಹಳ್ಳಿ ಸೇರಿರುವ ಯುವ ಸಮೂಹ ಅದರಲ್ಲೂ ಬೆಂಗಳೂರಿನಿಂದ ಬಂದು ಊರಿನಲ್ಲಿ ಖಾಯಂ ಆಗಿ ಸೇರಿಕೊಂಡಿರುವ ಮಂದಿ ತೋಟಗಳಲ್ಲಿ ಗುಂಪುಗೂಡುತ್ತಿದ್ದಾರೆ. ಇದರೊಂದಿಗೆ ಮಾಂಸದೂಟ ಮಾಡಿಕೊಂಡು ಗುಂಡಿನ ಪಾರ್ಟಿಯನ್ನು ನಡೆಸುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜೂಜಾಟ (ಕಾಡ್ಸ್೯) ಆಡುತ್ತಿದ್ದಾರೆ. ಇಂತಹ ಪ್ರಕರಣಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.


ಏಪ್ರಿಲ್ 1 ರಿಂದ ಈ ವರೆಗು ತೋಟದಲ್ಲಿ  ಪಾರ್ಟಿ ನೆಪದಲ್ಲಿ ಜೂಜಾಟವಾಡುತ್ತಿದ್ದ 68 ಪ್ರಕರಣಗಳನ್ನು ಜಿಲ್ಲೆಯ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದರ ಮೂಲಕ 6,65,354 ರೂ., ಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಈ ಎಲ್ಲಾ ಪ್ರಕರಣಗಳಲ್ಲಿಯೂ ಆರೋಪಿಗಳಿಗೆ ಪೊಲೀಸರು ಠಾಣಾ ಜಾಮಿನು ನೀಡಿ, ಬಿಡುಗಡೆಗೊಳಿಸುತ್ತಿದ್ದರು.


ಇದನ್ನೆ ಲಾಭವನ್ನಾಗಿಸಿಕೊಂಡಿದ್ದ ಕೆಲವರು, ರಾಜರೋಷವಾಗಿಯೇ ಜೂಜಾಟವಾಡುತ್ತಿದ್ದರು. ಅಪ್ಪಿತಪ್ಪಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಠಾಣಾ ಬೇಲ್ ಪಡೆದು, ನೆಮ್ಮದಿಯಾಗಿ ಓಡಾಡುತ್ತಿದ್ದರು. ಮತ್ತದೇ ಪಾರ್ಟಿ, ಜೂಜು ನಡೆಸುತ್ತಿದ್ದರು. ಹೀಗಾಗಿ, ಪೊಲೀಸ್ ಇಲಾಖೆ ಈ ಪ್ರಕರಣಗಳಿಗೆ ಕಡಿವಾಣ ಹಾಕಲು, ಕಠಿಣ ಕಾನೂನು ಕ್ರಮ ಜರುಗಿಸುವ ಸಲುವಾಗಿ ಜಾಮಿನು ರಹಿತ ಎಫ್‌ಐಆರ್‌ ನೊಂದಿಗೆ ಆರೋಪಿಗಳ ಮೇಲೆ ರೌಡಿ ಶೀಟರ್ ತೆರೆಯಲು ಮುಂದಾಗಿದ್ದಾರೆ.


*ರೌಡಿ ಶೀಟರ್ ತೆರೆದರೆ ಗತಿ ಏನು?*

ರಾಮನಗರ ಜಿಲ್ಲೆಯಲ್ಲಿ ಈಗಾಗಲೇ 279 ಮಂದಿ ರೌಡಿ ಶೀಟರ್‌ಗಳಿದ್ದಾಮಾತಿಲ್ಲಡುವವರು ಮತ್ತು ಎಣ್ಣೆ ಹಾಕುವವರನ್ನು ಹಿಡಿದು ಒಮ್ಮೆ ರೌಡಿ ಶೀಟರ್ ಪಟ್ಟಕ್ಕೆ ಸೇರಿಸಿ ರೌಡಿಪಟ್ಟ ಖಾಯಂಯಾದರೆ, ಸಾಕಷ್ಟು ಸಮಸ್ಯೆ ಕಾಡಲಿದೆ. ಜಿಲ್ಲೆಯಲ್ಲಿ ಎಲ್ಲೆ ರೌಡಿ ಶೀಟರ್‌ಗಳ ಪೆರೆಡ್ ನಡೆದರೂ ಈ ರೌಡಿಗಳು ಹಾಜರಾಗಬೇಕು. ಅದರಲ್ಲೂ ಈ ಯುವಕರು ಯಾವ ಸರಕಾರಿ ಕೆಲಸವು ದೊರೆಯುವುದಿಲ್ಲ. ಖಾಸಗಿ ಕೆಲಸಲ್ಲಿ ಪೊಲೀಸ್ ಪರಿಶೀಲನೆ ನಡೆಸಬೇಕಿದ್ದಲ್ಲಿ ಅದು ಸಹ ದೊರೆಯುವುದಿಲ್ಲ. ಪಾಸ್‌ಪೋರ್ಟ್ ದೊರೆಯುವುದಿಲ್ಲ. ಪದೆಪದೇ ನೈಟ್  ರೌಂಡ್ಸ್ ನಡೆಸುವ ಪೊಲೀಸರಿಗೆ, ರೌಡಿ ಶೀಟರ್‌ಗಳು ಮನೆಯಲ್ಲಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪ್ರತಿ ವಾರಕ್ಕೊಮ್ಮೆ ರೌಡಿ ಶೀಟರ್‌ಗಳ ಮನೆಗೆ ಸ್ಥಳೀಯ ಪೊಲೀಸರು ಪರಿಶೀಲನೆ ನೆಪದಲ್ಲಿ ಬರಲಿದ್ದಾರೆ.


ಇದರಿಂದಾಗಿ ಇಡೀ ಊರಿಗೆ ಇವನು ರೌಡಿಶೀಟರ್ ಪಟ್ಟ ಹೊತ್ತಿರುವುದು ಬಹಿರಂಗಗೊಳ್ಳಲಿದೆ. ಇದರಿಂದ ಮಾರ್ಯದೆಯು ಹರಾಜುಗೊಳ್ಳಲಿದೆ. ರೌಡಿ ಶೀಟರ್ ವಾಸವಿರುವ ಜಾಗದಲ್ಲಿ ಯಾವುದೇ ಅಪರಾಧ‘ ನಡೆದರೂ, ಅಲ್ಲಿನ ರೌಡಿ ಶೀಟರ್‌ಗಳನ್ನೆ ಮೊದಲು ವಿಚಾರಣೆಗೆ ಒಳಪಡಿಸಲಿದ್ದಾರೆ. ಸುಮಾರು 10 ವರ್ಷಗಳವರೆಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದ ರೌಡಿಶೀಟರ್‌ಗಳ ಸನ್ನಡತೆ ಆಧಾರದ ಮೇಲೆ ಪೊಲೀಸರೇ ಅವರನ್ನು ರೌಡಿಶೀಟರ್ ಪಟ್ಟದಿಂದ ಹೊರತೆಗೆಯಬೇಕಿದೆ. ಆತ ಎಷ್ಟೇ ಒಳ್ಳೆವನಾದರೂ ಹತ್ತು ವರ್ಷಗಳ ಕಾಲ ಆತ ರೌಡಿಯೇ ಆಗಿರುತ್ತಾನೆ.


*ಮನೆಯೇ ಮಂತ್ರಾಲಯ*

ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹರಡಲು ಕಾರಣವಾಗುವ  ತೋಟದ ಪಾರ್ಟಿಗಳು, ಜೂಜಾಟವಾಡಿ ಪೊಲೀಸರ ಅತಿಥಿಯಾಗಿ, ರೌಡಿ ಶೀಟರ್ ಪಟ್ಟ ಹೊರುವುದಕ್ಕಿಂತ ಮನೆಯಲ್ಲಿ-ಸುರಕ್ಷಿತವಾಗಿರುವುದೇ ಬೆಸ್ಟ್‌. ಒಮ್ಮೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರೆ ಜೀವನಪರ್ಯಂತ ರೌಡಿ ಶೀಟರ್‌ಗಳಾಗಿ ಪರದಾಡಬೇಕಾಗುತ್ತದೆ.


*ಖಡಕ್ ಐಪಿಎಸ್*

*ಜೂಜಾಟವಾಡುತ್ತಿದ್ದ 68 ಪ್ರಕರಣಗಳನ್ನು ಕಳೆದ 24 ದಿನಗಳಲ್ಲಿ ದಾಖಲಿಸಿಕೊಂಡು, 6,65,354 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಇಂತಿಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಠಾಣೆಯ ಜಾಮಿನು ನೀಡಲಾಗುತ್ತಿತ್ತು. ಇಂದಿನಿಂದ ಜಾಮಿನು ರಹಿತ ಪ್ರಕರಣದೊಂದಿಗೆ ಆರೋಪಿಗಳ ಮೇಲೆ ರೌಡಿ ಶೀಟರ್ ತೆರೆಯಲಾಗುವುದು. ಹೀಗಾಗಿ ಗ್ರಾಮಗಳಲ್ಲಿ ಗುಂಪುಗೂಡಿ ಜೂಜಾಟ, ಪಾರ್ಟಿ ಮಾಡುವ ಮೂಲಕ ಸೋಂಕು ಹರಡಿಸುವ ಬದಲು, ಮನೆಯಲ್ಲಿರಿ. ಈ ಹೊಸ ಕಾನೂನು ಕೇವಲ ಗ್ರಾಮೀಣ ಪ್ರದೇಶವಷ್ಟೇ ಅಲ್ಲಾ ನಗರ ಪ್ರದೇಶಗಳಿಗೂ ಅನ್ವಯಗೊಳ್ಳಲಿದೆ.*

*ಎಸ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ*

*ರಾಮನಗರ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ
ಜಿಲ್ಲೆಯಲ್ಲಿ ಮೊದಲ ಕೊರೊನಾ ಪತ್ತೆ

ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬಿಡದಿ ಬಳಿಯ ಬೈರಮಂಗಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌

ಸೆ.17 ರಂದು ತಪ್ಪದೇ  ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ.ಸೆ 17: ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 318 ಲಸಿಕಾ ತಂಡವನ್ನು ರಚಿಸಲಾಗಿದೆ. ತಂಡಗಳು

ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ
ಸೆ.17 ರಂದು ಜಿಲ್ಲೆಯಲ್ಲಿ 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ: ರಾಕೇಶ್ ಕುಮಾರ್ ಕೆ

ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50,000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ

ಸೆಪ್ಟೆಂಬರ್ 8  ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ
ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ

ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು  ಜಿಲ್ಲೆಯಾದ್ಯಂತ  ಕೋವಿಡ್-19 ಲಸಿಕಾ

ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ
ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳಿ ಡಾ ಅಶ್ವಥ್ ನಾರಾಯಣ

ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು  ಆಸ್ಪತ್ರೆಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ  ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ

ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ
ಕಾರ್ಮಿಕ ಇಲಾಖೆಯ ಕಿಟ್ ನೀಡಿದ ಜೆಡಿಎಸ್. ಕೊರೊನಾ ಲೆಕ್ಕಿಸದೆ ಮುಗಿಬಿದ್ದ ಸಹಸ್ರಾರು ಮಂದಿ

ಚನ್ನಪಟ್ಟಣ.ಜು.12: ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ  ಕಟ್ಟಡ ಕಾರ್ಮಿಕರಿಗೆ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಮಂತ್ರಿ ಮತ್ತು ಶಾಸಕರ ನೇತೃತ್

ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ
ಕೊರೊನಾ ಅಣಕಿಸಿದ ಕಾಂಗ್ರೆಸ್ ದಿನಸಿ ಕಿಟ್. ಕಿಟ್ ಗಾಗಿ ಮುಗಿಬಿದ್ದ ಜನಸಾಮಾನ್ಯರು. ಗಾಳಿಗೆ ತೂರಿಹೋದ ನಿಯಮ

ಕೊರೊನಾ ದಿಂದ ಜನಸಾಮಾನ್ಯರ ಬದುಕು ಅಧ:ಪತನಕ್ಕಿಳಿದಿರುವುದು ಸತ್ಯ. ಇದಕ್ಕಾಗಿ, ಪಕ್ಷಗಳು, ಸಂಘಸಂಸ್ಥೆಗಳು ಮತ್ತು ಉಳ್ಳವರನೇಕರು ಬಡಬಗ್ಗರಿಗೆ ದಿನಸಿ ಕಿಟ್ ನೀಡುತ್ತಿರುವುದು ಶ್ಲಾಘನೀಯವಾದರೂ ಕೋವಿಡ್

ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ
ವಾರಾಂತ್ಯ ಕರ್ಫ್ಯೂ, 6 ರಿಂದ 2. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ. ಜಿಲ್ಲಾಧಿಕಾರಿ

ರಾಮನಗರ: ವಾರಾಂತ್ಯದ ಕರ್ಫ್ಯೂ ಗೆ ಕಳೆದ ವಾರದಂತೆ ಈ ವಾರವೂ ಸಹ ಬದಲಾವಣೆಗಳೊಂದಿಗೆ ಮಾರ್ಪಡಿಸಿದ್ದು, ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ

ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಸಂಭವನೀಯ ಕೋವಿಡ್ 3 ನೇ ಅಲೆ-ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಸಂಭವನೀಯ ಕೋವಿಡ್ 3 ನೇ ಅಲೆಯ ಸಂದರ್ಭದಲ್ಲಿ ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ

115 ನೇ ದಿನಕ್ಕೆ ಕಾಲಿಟ್ಟ  ಇರುಳಿಗರ ಪ್ರತಿಭಟನೆ
115 ನೇ ದಿನಕ್ಕೆ ಕಾಲಿಟ್ಟ ಇರುಳಿಗರ ಪ್ರತಿಭಟನೆ

ರಾಮನಗರ: ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ 

ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೋವಿಡ್ ಎರಡನೇ ಅಲೆ ಹೆ

Top Stories »  


Top ↑